ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ, ಬಂಗಾಳಿ ಭಾಷೆಗಳಿಗೆ ‘ಶಾಸ್ತ್ರೀಯ ಭಾಷೆ’ ಸ್ಥಾನಮಾನ

4.8/5 - (6 votes)
Marathi, Pali, Prakrit, Assamese, and Bengali have been given 'classical language' status.
Marathi, Pali, Prakrit, Assamese, and Bengali have been given ‘classical language’ status.

ನರೇಂದ್ರ ಮೋದಿಯವರ ಸರ್ಕಾರ ಗುರುವಾರ ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ ಮತ್ತು ಬಂಗಾಳಿಗಳಿಗೆ ‘ಶಾಸ್ತ್ರೀಯ ಭಾಷೆ’ ಸ್ಥಾನಮಾನವನ್ನು ನೀಡಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ‘ಪ್ರಧಾನಿ ಮೋದಿ ಅವರು ಯಾವಾಗಲೂ ಭಾರತೀಯ ಭಾಷೆಗಳ ಮೇಲೆ ಕೇಂದ್ರೀಕರಿಸಿದ್ದಾರೆ, ಇಂದು ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ ಮತ್ತು ಬಂಗಾಳಿ ಮುಂತಾದ 5 ಭಾಷೆಗಳನ್ನು ಶಾಸ್ತ್ರೀಯ ಭಾಷೆಗಳಾಗಿ ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಮುಂದೆ ಒಟ್ಟು 11 ಭಾಷೆಗಳು ಭಾರತದಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳಾಗಿರುತ್ತವೆ ಅವುಗಳೆಂದರೆ ತಮಿಳು 2004 ರಲ್ಲಿ ಸಂಸ್ಕೃತ 2005 ರಲ್ಲಿ ತೆಲುಗು ಮತ್ತು ಕನ್ನಡ 2008 ರಲ್ಲಿ ಮಲೆಯಾಳಂ 2013 ರಲ್ಲಿ ಒರಿಯಾ 2014 ರಲ್ಲಿ ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ, ಮತ್ತು ಬಂಗಾಳಿ 2024 ರಲ್ಲಿ

ಭಾಷೆವರ್ಷ
ತಮಿಳು2004
ಸಂಸ್ಕೃತ2005
ತೆಲುಗು ಮತ್ತು ಕನ್ನಡ2008
ಮಲೆಯಾಳಂ2013
ಒರಿಯಾ2014
ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ, ಮತ್ತು ಬಂಗಾಳಿ2024

ಕೆಳಗಿನವುಗಳಲ್ಲಿ ಯಾವುದಕ್ಕೆ ಇತ್ತೀಚೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡಲಾಗಿದೆ? ( 2015 UPSC )

  1. ಒರಿಯಾ
  2. ಕೊಂಕಣಿ
  3. ಭೋಜ್‌ಪುರಿ
  4. ಮಲೆಯಾಳಂ
ಉತ್ತರ (ಕ್ಲಿಕ್ ಮಾಡಿ) ಒರಿಯಾ

Leave a Comment